Tuesday, December 26, 2006

ನೆನೆಯಬೇಕು...ನೆನೆಯಬೇಕು..



ಬಹಳ ದಿನಗಳಿಂದ ಕನ್ನ್ಡದಲ್ಲಿ ಬರೆಯಬೇಕೆನ್ನುತ್ತಿದ್ದೆ ಅದು ಇಂದು ಸಾದ್ಯವಾಯಿತು...





ನನಗೆ ಬಹುದಿನಗಳಿಂದ ಕಾಡುತ್ತಿರುವ ಪ್ರಶ್ನೆ ಅನ್ದರೆ "ಗೆಲ್ಲುವುದು ಹಾಗೂ ಸೋಲಿಸುವುದಕ್ಕೂ ವ್ಯತ್ಯಾಸ ಇದೆಯೆ ? ಇದ್ದರೆ ಅದೇನು ?" ಇದರಲ್ಲಿ ವ್ಯತ್ಯಸ ಇದ್ದರೆ ಅದನ್ನು ಹುಡುಕಿ ಮುಂದಿನ ಅನ್ಕಣದಲ್ಲಿ ಬರೆಯುತ್ತೇನೆ...



ನನಗೆ ಮೊದಲಿನಿನ್ದಲೂ ತಿನ್ಡಿಗಲನ್ನು ವಿಚಿತ್ರ ರೀತಿಯಲ್ಲಿ ಸಂಸ್ಕರಿಸಿ (ಕಲಬೆರಕೆ ಎನ್ನುವುದು ಸೂಕ್ತಪದವಾದೀತು) ತಿನ್ನುವ ಹುಚ್ಚು ಅಭ್ಯಾಸ.

ಆದೇ ರೀತಿಯಲ್ಲಿ ಮೊನ್ನೆ ನಾನು ಅಜ್ಜನ ಮನೆಗೆ ಹೋದಾಗ

ಒಂದಿಶ್ಟು (ಚೌಕಾಶಿ ಯಾಕೆ ಒಮ್ದತ್ತು) ಅಂಬೊಡೆಯನ್ನು ಬೌಲ್ನಲ್ಲಿ ಹಾಕಿ ಅದಕ್ಕೆ ಮಧ್ಯಾನ್ಹದ ಹುಳಿಯನ್ನು ಅದರ ಎರಡರಸ್ಟು ಅರ್ಗೆಯಂತೆ ಬಿಟ್ಟು ಒಮ್ಡು ಎರಡು ಘಂಟೆ ನೆನೆಯಲು ಬಿಟ್ಟೆ. ಇದೆಲ್ಲಾ ಅಜ್ಜನ ಎದುರಿಗೆ ನಡೆದದ್ದು. ಆಜ್ಜ ಎರಡು ನಿಮಿಶ ಆಲೊಚಿಸಿ ಹೀಗೆಮ್ದ...



ಆಪೀ ನಿಂಗೆ ಈ ಕತೆ ಗೊತ್ತಿದ್ದನೂ ?

ಯಾವ್ದಾ ಅಜಾ ?

ಹಿಂದಿನ ಕಾಲ್ದಲ್ಲಿ ಒಬ್ಬವ ಮುದುಕಮ್ಮ ಇದ್ಲಡ. ಅವ್ಳ ಮನಿಗೆ ಒಬ್ಬವ ಬೇಡವ ಬಂದು ಅದು ಕೊಡಿ ಇದು ಕೊಡಿ ಅನ್ದ್ನಡ! ಯಾವಗ್ಳು ಬೇಡೋರು ಹೇಳ್ತ್ವಲ ಹಂಗೆ...ಹಂಗೆ ಸಯ್ಯಿ ಮುದುಕಮ್ಮ ಹೇಳ್ತಡ "ಈ ಹೊತ್ತಿಗೆ ಎನ್ತು ಇರ್ತದ್ಯ ಕೊಡ್ಲಿಕ್ಕೆ ? ಗಂಟೆ ಮೂರಾತು...ಎಲ್ಡು ಅಡಿಕೆ ಕೊಡ್ತೀನಿ ತಗಂಡು ಹೋಗು" ಇವ ಇನ್ನೆಂತು ಕಾನ್ದೆ "ಸರಿ ಅದಾರೆ ಅದ್ನೆ ಕೊಡಿ" ಅಂದ್ನಡ. ಹಂಗೆ ಏನಾತು ಆ ಅಜ್ಜಿ ಒಳಗೆ ಹೋಗಿ ಅಡಿಕೆ ತಗಬರ ಅಷ್ಟೊತ್ತಿಗೆ ಈ ಬೇಡವ "ನೆನೆಯಬೇಕು ನೆನೆಯಬೇಕು" ಅಮ್ತ ಹೇಲ್ತ ಇದ್ನಡ. ಆ ಅಜ್ಜಿಗೆ ಅಲೆಲೆಲೆಲೆ ಇವುನ್ಗೆ ಹ್ಯನ್ಗೆ ಗೊತ್ತಾತು ಆನು ಅವಲಕ್ಕಿನ ಅಡಿಗೆ ಮನೇಲಿ ನೆನ್ಶಿ ಇಟ್ಟಿದ್ದು ಅಮ್ತ ಮನ್ಸಗೆ ಅನ್ದ್ಕನ್ಡು "ಆಲ್ದ ನಿಮ್ಗೆ ಅವಲಕ್ಕಿ ನೆನ್ಶಿ ಇಟ್ಟಿದ್ದು ಹ್ಯಾನ್ಗೆ ಗೊತ್ತಾತು ?" ಮತ್ತೆ ಆ ಬೇಡವ "ನೆನೆಯಬೇಕು...ನೆನೆಯಬೇಕು..." ಅಮ್ತ. ಆ ಅಜ್ಜಿ ಇವನ್ಗೆ ಕೊಟ್ಟೋರ್ತು ಉಲಿಗಾಲಿಲ್ಲೆ ಹೇಳಿ "ತಗ ಈ ಅವಲಕ್ಕಿ ತಿನ್ದ್ಕನ್ಡು ಅಲ್ಲೆಲ್ಲೂ ಕಸ ಮಾಡ್ದೆ ನೆಡುದ್ಬುಡು" ಅಮ್ತ ಕೊಟ್ಟೆಬುಟ್ಲಡ. ಆವ ಹೇಲಿದ್ದು ದೇವ್ರುನ್ನ ನೆನೆಯಕ್ಕು ಅಮ್ತ. ಈ ಅಜ್ಜಿಗೆ ಅದು ಗೊತ್ತಿಲ್ಲೆ. ಗೊತಾತ ಇಲ್ಯ...

ಅವಲಕ್ಕಿ ಕೊಡಕು ಬೇಡವ "ಇಷ್ಟು ಹೊತ್ತು ದೇವ್ರುನ್ನ ನೆನೆದಿದ್ದಕ್ಕೆ ಈಗ ಅವಲಕ್ಕಿ ತಿನ್ನಕ್ಕೆ ಸಿಕ್ತು" ಅಮ್ತ ಹೆಲ್ಕ್ಯನ್ಡು ಮುಮ್ದಿನ ಮನಿಗೆ ಹೋದ್ನಡ.

ಹಂಗೆ ನೀನು ಇಷ್ಟು ಹೊತ್ತು ನೆನ್ಶಿ ಇಟ್ರೆ ಹಿಂಗೆ ಆಪ ತರ ಇದ್ದು ಅಮ್ತ ತಮಾಷೆ ಮಾಡ್ದ.

ಇಲ್ಲೆ ಆನು ಬೇಗ ತಿನ್ದುಬುಡ್ತಿ ಅಮ್ತ ಹೆಲಿ ಮೆತ್ತಿಯ ಕಡೆಗೆ ಹೊರೆಟೆ.

ಕೊನಿಗೆ ಟೀ ಕುಡಿಯಕ್ಕರೆ ಆನು, ಮಾವ, ಅತ್ತೆ ಆ ಕತೆ ನೆನ್ಶ್ಕ್ಯನ್ಡು:) ನಗಾಡಿದ್ದೇ ನಗಾಡಿದ್ದು.



ಸಿಗುವ,

ವಿಶ್ವ




1 comment:

Harisha - ಹರೀಶ said...

ಕಥೆ ಚೆನ್ನಾಗಿದ್ದು.. ಆದ್ರೆ ಸ್ವಲ್ಪ ಕಾಗುಣಿತ ಸರಿಯಾಗಿ ಬರದ್ರೆ ಓದಕ್ಕೆ ಇನ್ನೂ ಮಜಾ ಬರ್ತು...